1.01.2017

ಎಲ್ಲೆಲ್ಲಿ ನೋಡಲಿ| ಚಿತ್ರ: ನಾ ನಿನ್ನ ಮರೆಯಲಾರೆ(1973)|ಹಾಡಿದವರು: ರಾಜ್ ಕುಮಾರ್, ಜಾನಕಿ ಎಸ್| Ellelli Nodale Ninnanne Kaanuve|

ಚಿತ್ರ: ನಾ ನಿನ್ನ ಮರೆಯಲಾರೆಹಾಡಿದವರು: ರಾಜ್ ಕುಮಾರ್, ಜಾನಕಿ ಎಸ್
ನಟರು: ರಾಜ್ ಕುಮಾರ್, ಲಕ್ಷ್ಮಿ


ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ

ಆ ಕೆಂಪು ತಾವರೆ ಆ ನೀರಿಗಾದರೆ
ಈ ಹೊನ್ನ ತಾವರೆ ನನ್ನಾಸೆಯಾಸರೆ
ಆ.........
ಮಿಂಚೆಂಬ ಬಳ್ಳಿಗೆ ಮೇಘದ ಆಸರೆ
ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ
ಯುಗಗಳೇ ಜಾರಿ ಉರುಳಿದರೇನು
ನಾನೇ ನೀನು ನೀನೆ ನಾನು
ಆದಮೇಲೆ ಬೇರೆ ಏನಿದೆ.....

ರವಿಯನ್ನು ಕಾಣದೆ ಹಗಲೆಂದು ಆಗದು
ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ
ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ

ಪ್ರೇಮದಿಂದ ನಿನ್ನ ಸೇರುವೆ.....


No comments:

Post a Comment