1.01.2017

ನಲಿವ ಗುಲಾಬಿ ಹೂವೆ।ಚಿತ್ರ: ಆಟೋ ರಾಜ|(1980) ಎಸ. ಪಿ. ಬಾಲಸುಬ್ರಮಣಿಯಮ್| Naliva Gulabi Hoove

ಹಾಡು : ನಲಿವ ಗುಲಾಬಿ ಹೂವೆ। ಚಿತ್ರ: ಆಟೋ ರಾಜ ।  

ಎಸ. ಪಿ. ಬಾಲಸುಬ್ರಮಣಿಯಮ್ 

__________________________________

ನಲಿವ ಗುಲಾಬಿ ಹೂವೆ, ಮುಗಿಲ ಮೇಲೇರಿ ನಗುವೇ
ನಲಿವ ಗುಲಾಬಿ ಹೂವೆ, ಮುಗಿಲ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೋ............

ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ

ಒಲವಿನ ಬಲೆಯಲಿ ಸೆಳೆಯುತ ಕುಣಿದೆ ಸೊಗಸಾಗಿ ಹಿತವಾಗಿ

ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ

ಬಯಸದೆ ಬಳಿಯಲಿ ಸುಳಿಯುತ ಒಲಿದೆ, ಇಂದೇಕೆ ದೂರಾದೆ?

ಹೀಗೇಕೆ ಮರೆಯಾದೆ?...........................

ಸುಮವೇ ನೀ ಬಾಡದಂತೆ ಬಿಸಿಲ ನೀ ನೋಡದಂತೆ

ನೆರಳಲಿ ಸುಖದಲಿ ನಗುತಿರು ಚೆಲುವೆ ಎಂದೆಂದೂ ಎಂದೆಂದೂ

ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ

ಕನಸಲಿ ನೋಡಿದ ಸಿರಿಯನು ಮರೆವೇ ನಿನಗಾಗಿ ನನಗಾಗಿ.....



No comments:

Post a Comment