6.11.2021

ರುಕ್ಕಮ್ಮ | ಚಿತ್ರ : ಸಿಪಾಯಿ(೧೯೯೬) | Rukkamma| Film : Sipayi (1996)

ರುಕ್ಕಮ್ಮ ನಾ ನೂರು ಊರು ನೋಡಿ ಬಂದೆ ರುಕ್ಕಮ್ಮ, 
ನೂರರಲ್ಲೂ ನಮ್ಮ ಊರೇ ಊರಮ್ಮ
ರುಕ್ಕಮ್ಮ ನಾ ನೂರು ಮಾತು ಕೇಳಿ ಬಂದೆ ರುಕ್ಕಮ್ಮ 
ನೂರರಲ್ಲೂ ನಮ್ಮ ಮಾತೆ  ಮಾತಮ್ಮ||

ಹೇ ರುಕಮ್ಮ, ಹೇ ರುಕಮ್ಮ, ಹೇ ರುಕಮ್ಮ, ನಮ್ಮ ಊರೇ ಊರಮ್ಮ   
ಹೇ ರುಕಮ್ಮ ನಮ್ಮ ಮಾತೆ ಮಾತಮ್ಮ 
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು,
ಜೀವ ನಿಡು ಅಂದರು  ನೀಡುವೇ ನಾ.
ಹೇ ರುಕಮ್ಮನಮ್ಮ ಊರೇ ಊರಮ್ಮ 
ಹೇ ರುಕಮ್ಮ ನಮ್ಮ ಮಾತೆ ಮಾತಮ್ಮ ||

ಗಗನ ಗಾಳಿಯಲಿ ಜಿಗಿದು ಜೀವಿಸಲಿ ಚೆಲುವ ಕನ್ನಡದ ಬಾವುಟ
ತಿರುಗು ಭೂಮಿಯಲಿ ಮಿನುಗಿ ತೋರಿಸಲಿ ಚೆಲುವ ಕನ್ನಡದ ಭೂಪಟ
ಮಾತಿನ ಜೊತೆಯಲ್ಲೇ ಗಂಧವಿರೋ ಕನ್ನಡ ಕಸ್ತೂರಿ ಎಲ್ಲೊ ಇಲ್ಲ,
ಊರಿನ ಹೆಸರಲ್ಲೇ ಕರುಣೆ ಇರೋ, ಕರುಣೆಯ ಕರುನಾಡು ಎಲ್ಲೂ ಇಲ್ಲ
ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ,
ಸತ್ಯವೇ ಹೇಳುವದೇ ಕಾಯಕ ಎನ್ನುತ್ತಾರೆ  ಇಲ್ಲಿ
ರುಕ್ಕಮ್ಮ ನಾ ಏಳು ಕೆರೆಯ ನೀರು ಕೂಡಿದೆ ರುಕ್ಕಮ್ಮ್,
ಏಳರಲ್ಲೂ ನಮ್ಮ ನೀರೇ ನೀರಮ್ಮ||

ಹೇ ರುಕಮ್ಮ, ಹೇ ರುಕಮ್ಮ, ಹೇ ರುಕಮ್ಮ, ನಮ್ಮ ಊರೇ ಊರಮ್ಮ   
ಹೇ ರುಕಮ್ಮ ನಮ್ಮ ಮಾತೆ ಮತಮ್ಮ್
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು ಜೀವ ನಿಡು ಅಂದರು  ನೀಡುವೇ ನಾ.
ಹೇ ರುಕಮ್ಮ ನಮ್ಮ ಊರೇ ಊರಮ್ಮ 
ಹೇ ರುಕಮ್ಮ ನಮ್ಮ ಮಾತೆ ಮಾತಮ್ಮ ||

ಇಲ್ಲಿರೋ ಸೌಭಾಗ್ಯ ಎಲ್ಲೂ ಇಲ್ಲ , ಈಶ್ವರಿ ತಾಯಿ ಇರೋ ಊರೇ ಇದು,
ಇಲ್ಲಿರೋ ಆನಂದ ಎಲ್ಲೂ ಇಲ್ಲ, ನೆಚ್ಚಿದ ಹುಡುಗಿ ಇರೋ ಊರೇ ಇದು ,
ನನ್ನ ಕಣ್ಣಿಗೇನಾದರೂ ನನಗೆ ತಾನೇ ನೋವು, ನನ್ನಮಣ್ಣಿಗೆನಾದರೂ ನನಗೆ ತಾನೇ ನೋವು
ರುಕ್ಕಮ್ಮ ನಾ ನೂರು ತರದ ಹೂವ ನೋಡಿದೇ  ರುಕ್ಕಮ್ಮ 
ನೂರರಲ್ಲು  ದುಂಡು  ಮಲ್ಲಿಗೆ ಮೊದಲಮ್ಮ ||

ಹೇ ರುಕಮ್ಮ, ಹೇ ರುಕಮ್ಮ, ಹೇ ರುಕಮ್ಮ, ನಮ್ಮ ಊರೇ ಊರಮ್ಮ   
ಹೇ ರುಕಮ್ಮ ನಮ್ಮ ಮಾತೆ ಮತಮ್ಮ್
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು ಜೀವ ನಿಡು ಅಂದರು  ನೀಡುವೇ ನಾ.
ಹೇ ರುಕಮ್ಮ ನಮ್ಮ ಊರೇ ಊರಮ್ಮ 
ಹೇ ರುಕಮ್ಮ ನಮ್ಮ ಮಾತೆ ಮಾತಮ್ಮ ||