1.06.2017

ನೆರಳನು ಕಾಣದ ಲತೆಯಂತೆ| ಚಿತ್ರ :ಅವಳ ಹೆಜ್ಜೆ | Neralanu kaanada Lateyante| FIlm: Avala Hejje|1981

ನೆರಳನು ಕಾಣದ ಲತೆಯಂತೆ 
ಚಿತ್ರ :ಅವಳ ಹೆಜ್ಜೆ 

ಗಾಯಕರು:ಎಸ್.ಪಿ.ಬಾಲಸುಬ್ರಮಣ್ಯಂ 

ನೆರಳನು ಕಾಣದ ಲತೆಯಂತೆ, ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ
ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ

ನಯನದಲಿ ಕಾಂತಿ ಇಲ್ಲಾ,ತುಟಿಗಳಲಿ ನಗುವೇ ಇಲ್ಲಾ,
ಸವಿಯಾದ ಮಾತನು ಇಂದೇಕೋ ಕಾಣೆನು.
ನಿನ್ನ ಮನಸು ನಾನು ಬಲ್ಲೆ,ನಿನ್ನ ವಿಷಯವೆಲ್ಲ ಬಲ್ಲೆ,
ನೀನೇನು ಹೇಳದೆ,ನಾನೆಲ್ಲಾ ಹೇಳಲೇ,
ಏನಿಂತ ನಾಚಿಕೆ,ಕಣ್ಣೀರು ಏತಕೆ.

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ಗುಡಿಯ ದೇವಿ ನೀನು, ತನುವಾ ಪ್ರಾಣ ನೀನು,
ಬಾಳಲ್ಲಿ ನೆಮ್ಮದಿ,ನಿನ್ನಿಂದ ಕಂಡೆನು,
ನೀ ಅಳಲು ನೋಡಲಾರೆ,ನೀ ಇರದೇ ಬಾಳಲಾರೆ,
ನನ್ನಲ್ಲಿ ಕೋಪವೇ,ನಾ ನಿನಗೆ ಬೇಡವೇ,
ನೀ ದೂರವಾದರೆ ನನಗಾರು ಆಸರೆ........

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ
ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ

No comments:

Post a Comment