1.06.2017

ನೆರಳನು ಕಾಣದ ಲತೆಯಂತೆ| ಚಿತ್ರ :ಅವಳ ಹೆಜ್ಜೆ | Neralanu kaanada Lateyante| FIlm: Avala Hejje|1981

ನೆರಳನು ಕಾಣದ ಲತೆಯಂತೆ 
ಚಿತ್ರ :ಅವಳ ಹೆಜ್ಜೆ 

ಗಾಯಕರು:ಎಸ್.ಪಿ.ಬಾಲಸುಬ್ರಮಣ್ಯಂ 


ನೆರಳನು ಕಾಣದ ಲತೆಯಂತೆ, ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ
ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ

ನಯನದಲಿ ಕಾಂತಿ ಇಲ್ಲಾ,ತುಟಿಗಳಲಿ ನಗುವೇ ಇಲ್ಲಾ,
ಸವಿಯಾದ ಮಾತನು ಇಂದೇಕೋ ಕಾಣೆನು.
ನಿನ್ನ ಮನಸು ನಾನು ಬಲ್ಲೆ,ನಿನ್ನ ವಿಷಯವೆಲ್ಲ ಬಲ್ಲೆ,
ನೀನೇನು ಹೇಳದೆ,ನಾನೆಲ್ಲಾ ಹೇಳಲೇ,
ಏನಿಂತ ನಾಚಿಕೆ,ಕಣ್ಣೀರು ಏತಕೆ.

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ಗುಡಿಯ ದೇವಿ ನೀನು, ತನುವಾ ಪ್ರಾಣ ನೀನು,
ಬಾಳಲ್ಲಿ ನೆಮ್ಮದಿ,ನಿನ್ನಿಂದ ಕಂಡೆನು,
ನೀ ಅಳಲು ನೋಡಲಾರೆ,ನೀ ಇರದೇ ಬಾಳಲಾರೆ,
ನನ್ನಲ್ಲಿ ಕೋಪವೇ,ನಾ ನಿನಗೆ ಬೇಡವೇ,
ನೀ ದೂರವಾದರೆ ನನಗಾರು ಆಸರೆ........

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ
ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ

1.03.2017

ಕಣ್ಣಲ್ಲಿ ಜ್ಯೋತಿ ತಂದೊನು ನೀನೇ| Kannalle Jyothi Tandonu Neene| Film - Hrudaya haadithu(1991)

ಕಣ್ಣಲ್ಲಿ ಜ್ಯೋತಿ ತಂದೊನು ನೀನೇ ||ನನ್ನಲ್ಲಿ ಪ್ರೀತಿ ತಂದೊನು ನೀನೇ ||

ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೆ ||
ಎನ್ನುತಿದೆ ಈ ಹ್ರುದಯ ||
ಪ್ರೀತಿಸುವಾ ಬಾ ಇನಿಯಾ || (2)

ಬದುಕೆನು ನಿನ್ನ ನಾನು ನೋಡದೆ ಈಗ || (2)
ಅಳುವುದು ನನ್ನ ಈ ಜೀವ ದೂರ ಇರುವಾಗ ||
ಮನಸಿನ ಮಾತ ನಲ್ಲ ಕೇಳಿತು ಬೇಗ ||
ಬಯಕೆಯ ಬೇಗ ಪೂರೈಸು ತೋರಿ ಅನುರಾಗ ||
ಕೋಪದಲಿ ನೋಡದಿರು ಬೇದನೆಯ ತುಂಬದಿರು ||
ಎನ್ನುತಿದೆ ಈ ಹ್ರುದಯ ||
ಪ್ರೀತಿಸುವಾ ಬಾ ಇನಿಯಾ ||
ಕಣ್ಣಲ್ಲಿ ಜ್ಯೋತಿ ತಂದೊನು ನೀನೇ ||
ನನ್ನಲ್ಲಿ ಪ್ರೀತಿ ತಂದೊನು ನೀನೇ ||
ಆ…. ಓ….
ಕನಸಲಿ ನನ್ನ ಸೇರಿ ಹಾಡುವೆ ನೀನು || (2)
ಯೆದುರಲಿ ಬಂದು ನಿಂತಾಗ ಮೌನ ಇದು ಏನು ||
ಎದೆಯಲಿ ಪ್ರೀತಿಯನ್ನು ತುಂಬಿದ ನೀನು ||
ಕರೆದರೆ ದೂರ ಹೋಗದು ದೂರ ಸರಿಯೇನು ||
ನೀರಿರಲೇ ಈ ಹಸಿರು ನಿನ್ನೊಲವೆ ನನ್ನಿಸುರು ||
ಎನ್ನುತಿದೆ ಈ ಹ್ರುದಯ ||
ಪ್ರೀತಿಸುವಾ ಬಾ ಇನಿಯಾ ||
ಕಣ್ಣಲ್ಲಿ ಜ್ಯೋತಿ ತಂದೊನು ನೀನೇ ||
ನನ್ನಲ್ಲಿ ಪ್ರೀತಿ ತಂದೊನು ನೀನೇ ||

1.01.2017

ಎಂದೆಂದೂ ನಿನ್ನನು ಮರೆತು| ಚಿತ್ರ: ಎರಡು ಕನಸು| Endendu Ninnanu Maretu| Film: Eradu Kanasu (1974)

ಚಿತ್ರ: ಎರಡು ಕನಸು
 ಹಾಡಿದವರು: ಪಿ ಬಿ ಶ್ರೀನಿವಾಸ್, ವಾಣಿ ಜಯರಾಂ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ


ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ...ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ.....................

ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ.....

ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ

ನಾನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ........

ಭಲೇ ಭಲೇ ಚೆಂದದ | ಚಿತ್ರ: ಅಮೃತ ವರ್ಷಿಣಿ| Bhale Bhale Chandada| Film: Amrutavarshini (1997)

ಚಿತ್ರ: ಅಮೃತ ವರ್ಷಿಣಿ 

ಹಾಡಿದವರು: ಎಸ್ ಪಿ ಬಾಲಸುಬ್ರಮಣ್ಯಂನಟರು: ರಮೇಶ್, ಸುಹಾಸಿನಿ, ಶರತ್ ಬಾಬು
  

ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ
ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ.....

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ  ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು  ಕಾಲಡಿ ಹೂವಾಗಿ ಬರಬೇಕು

ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೆ
ನಿನ್ನ ಈ ಸರಿಗಮ ಕೇಳಿತು ಸಮಸಮ ಹಂಚಿತು
ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತು ನೋಡೋಕೆ ನಾ ಬಂದರೆ
ನಿನ್ನದೇ ಥಕಥೈ ಕಂಡಿತು ತಕದಿಮಿ ಹೆಚ್ಚಿತು
ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ
ಎಲ್ಲ ಸಾಲಲ್ಲು ಎಣುಕೋ ಅಕ್ಷರ ನಿಂದೇನ
ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ.....

ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರು
ಅಂದವ ಹೊಗಳಲು ಸಾಧ್ಯವೇ ನಿನ್ನ ಮುಂದೆ ಮೌನವೇ
ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ
ನಡುವೆ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೆ
ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೋ ಕಾವಲಿದೆ
ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ

ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ......

ಜೊತೆಯಲಿ ಜೊತೆ ಜೊತೆಯಲಿ|ಚಿತ್ರ: ಗೀತ | Jotheyali Jyothejyotheyali| Film: Geeta (1981)

ಚಿತ್ರ: ಗೀತ
ಹಾಡಿದವರು: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ಶಂಕರ್ ನಾಗ್


ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓ....ಎಂತ ಮಾತಾಡಿದೆ ಇಂದು ನೀ
ಎಂತ ಮಾತಾಡಿದೆ, ನನ್ನ ಮನಸಿನ ಭಾವನೆ ನೀನೆ ಹೇಳಿದೆ

ಪ್ರೀತಿಯೆಂದರೇನು ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ..............................

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ

ಹಗಲು ಇರುಳು ಒಂದಾಗಿ ಹಾಡುವ.............................