1.01.2017

ಕೇಳದೆ ನಿಮಗೀಗ ದೂರದಲ್ಲಿ ಯಾರೋ| ಚಿತ್ರ: ಗೀತ (1981)| Kelade Nimageega| Film: Geeta

ಚಿತ್ರ: ಗೀತ
ಹಾಡಿದವರು: ಎಸ್ ಪಿ ಬಾಲು
ನಟರು: ಶಂಕರ್ ನಾಗ್


ಕೇಳದೆ ನಿಮಗೀಗ ದೂರದಲ್ಲಿ ಯಾರೋ 
ಹಾಡು ಹೇಳಿದಂತೆ ಒಂದು ಹೆಣ್ಣಿನ... 
ಓ..... ನೊಂದ ವಿರಹ ಗೀತೆ

ಸಂಪಿಗೆ ಒಂದೂರು ಮಲ್ಲಿಗೆ ಒಂದೂರು, ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು, ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ, ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ

ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ........

ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ

ಆ ಜೋಡಿಯ ಕತೆಯಂದಿಗೆ ಕೊನೆಯಾಯಿತು ಹೀಗೆ........

ನಮ್ಮೂರ ಮಂದಾರ ಹೂವೆ|ಚಿತ್ರ: ಆಲೆಮನೆ(1981)| Nammura Mandaara Hoove| Film: Alemane

ಚಿತ್ರ: ಆಲೆಮನೆ

ನಟರು: ಸುರೇಶ ಹೆಬ್ಳಿಕರ್, ರೂಪ ಚಕ್ರವರ್ತಿ
ಗಾಯನ: ಎಸ್ ಪಿ ಬಾಲು

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು.........

ಕಣ್ಣಲ್ಲೇ ಕರೆದು ಹೊಂಗನಸ ತೆರೆದು ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ, ಸೊಗಸಾದ ಕಾರಂಜಿ ಬಿರಿದೆ
 ನಮ್ಮೂರ ಮಂದಾರ ಹೂವೆ.........

ಒಡಲಾಳ ಮೊರೆದು ಒಡನಾಟ ಮೆರೆದು ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ ಹಿತವಾದ ಮಾಧುರ್ಯ ಮಿಂದೆ

ತೀರದ ಮೋಹದ ಇನಿದಾದ ಆನಂದ ತಂದೆ, ಇನಿದಾದ ಆನಂದ ತಂದೆ
ನಮ್ಮೂರ ಮಂದಾರ ಹೂವೆ........

ತಮ್ ನಮ್ ತಮ್ ನಮ್ ತಮ್ ನಮ್| ಚಿತ್ರ: ಎರಡು ಕನಸು(1974)| Tam Nam Tam Nam |Film: Eradu Kanasu (1974)

ಚಿತ್ರ: ಎರಡು ಕನಸು 

ಗಾಯನ: ಪಿ ಬಿ ಶ್ರೀನಿವಾಸ್, ಎಸ್ ಜಾನಕಿ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ

ತಮ್ ನಮ್ ತಮ್ ನಮ್ ತಮ್ ನಮ್ ಮನಸು ಮಿಡಿಯುತಿದೆ
ಹೋ ಸೋತಿದೆ.....

ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ....
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ.....

ತಮ್ ನಮ್ ತಮ್ ನಮ್ ನನ್ನೀ ಮನಸು ಮಿಡಿಯುತಿದೆ.....
ಹೋ ಸೋತಿದೆ.....

ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ....
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ.....

ನೀ ಸನಿಹಕೆ ಬಂದರೆ ತನುವಿದು ನಡುಗುತಿದೆ ಏತಕೆ ಎದೆ ಝಲ್ ಎಂದಿದೆ
ಅಹಹ....ಒಲಿದಿಹ ಜೀವವು ಬೆರೆಯಲು ಮನ ಹೂವಾಗಿ ತನು ಕೆಂಪಾಗಿ ನಿನ್ನ ಕಾದಿದೆ.....

ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯ ಹಾಸುವೆ ಕೈ ಹಿಡಿದು ನಡೆಸುವೆ

ಅಹಹ....ಮೆಲ್ಲಗೆ ನಲ್ಲನೆ ನಡೆಸು ಬಾ ಎಂದೂ ಹೀಗೆ ಇರುವ ಆಸೆ ನನ್ನೀ ಮನಸಿಗೆ....

ಜೀವ ವೀಣೆ ನೀಡು ಮಿಡಿತದ ಸಂಗೀತ |ಚಿತ್ರ: ಹೊಂಬಿಸಿಲು| Jeev Veene Needu Miditada| Film: Hombisilu(1978)

ಚಿತ್ರ: ಹೊಂಬಿಸಿಲು 

ಗಾಯನ: ಎಸ್ ಪಿ ಬಾಲು, ಎಸ್ ಜಾನಕಿ
ನಟರು: ವಿಷ್ಣುವರ್ಧನ್, ಆರತಿ

ಜೀವ ವೀಣೆ ನೀಡು ಮಿಡಿತದ ಸಂಗೀತ
ಓ...ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಇಂದು ಮಿಲನದ ಸಂತೋಷ ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು.....

ಮಿಡಿಯುವ ಮನಗಳು ಎರಡು ಮಿಡಿತದ ರಾಗವು ಒಂದೆ
ಮಿಂಚುವ ಕಣ್ಣಂಚಿನ ಸಂಚು ಇಂದು ಒಂದೇ
ಆ........ಲಲಲ.....ಆ......
ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೆ
ಸೇರುವ ಶುಭ ಸಮಯದಿ ವಿರಹ ಇರದು ಮುಂದೆ.....

ಭಾವ.......
ಜೀವ.......

ಒಲವಿನ ಬಯಕೆಯು ಅಂದು ಮಿಲನ ಮಹೋತ್ಸವವಿಂದು
ರಚಿಸುವ ನಾವನುದಿನ ಮುದದ ಪ್ರೇಮ ಕವನ.....
ಕನಸಿನ ರಾತ್ರಿಯು ಕಳೆದು ಬಂದಿರೆ ನೆನೆಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದ ಸೂರ್ಯ ಕಿರಣ.....

ತಂಗಾಳಿಯಲ್ಲಿ ನಾನು ತೇಲಿ ಬಂದೆ| TangaaLiyalli naanu| ಚಿತ್ರ: ಜನುಮ ಜನುಮದ ಅನುಬಂಧ (1980)

ಚಿತ್ರ: ಜನುಮ ಜನುಮದ ಅನುಬಂಧ  
ಹಾಡಿದವರು: ಎಸ್ ಜಾನಕಿ
ನಟರು: ಅನಂತ್ ನಾಗ್, ಆರತಿ

ಓ......

ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯ.........ಓ ಇನಿಯ......
ನನ್ನನ್ನು ಸೇರಲು ಬಾ ಬಾ
ನನ್ನನ್ನು ಸೇರಲು.....

ನಿನ್ನ ಎಲ್ಲೂ ಕಾಣದೆ ಹೋಗಿ
ನನ್ನ ಜೀವ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ
ಹೀಗೇಕೆ ದೂರ ಓಡಿದೆ
ಓ ಇನಿಯ......ನನ್ನನ್ನು ಸೇರಲು ಬಾ ಬಾ 
ನನ್ನನ್ನು ಸೇರಲು.....

ಓ....

ಏತಕೆ ಹೀಗೆ ಅಲೆಯುತಲಿರುವೆ
ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು
ನೀ ಕಾಣೆ ಏನು ನನ್ನನ್ನು
ಓ ಇನಿಯ.....ನನ್ನನ್ನು ಸೇರಲು ಬಾ ಬಾ

ನನ್ನನ್ನು ಸೇರಲು....