1.24.2024

||ನೆನಪು || Nenapu||

 

ನೆನಪು

ಕಳೆದ ಆ ದಿನಗಳೇ ನೆನಪಾಗಿದೆ ನನಗಿಲ್ಲಿ,

ಬರುವೆಯಾ ನೀ ಹಿಂದಿರುಗಿ,

ಮಿಡಿಯುತಿದೆ ನನ್ನೀ ಮನ ಕರಗಿ,

ಬಂದರೆ ನೀ ಹಿಂದಿರುಗಿ,

ಚಲಿಸುವೆ ನಾ ಮರಳಿ,

ಪ್ರೀತಿಯ ಆ ಹೆಸರಲಿ ಕುಳಿತಿರುವೆ ಈ ಮನದಲಿ,

ಕೇಳದೆ ಕಣ್ಮರೆಯಾದೆಯಾ ಯಾವೊದೋ ನೆಪದಲಿ,

ನಾಟಕದ ಜೀವನ ಸಾಕಾಗಿದೆ ನನಗಿಲ್ಲಿ,

ಮತ್ತೊಮ್ಮೆ ನಗಿಸಲು ಬರುವೆಯಾ ನೀ ಮರಳಿ,

ನಾ ಕಾಯುತಿರುವೆ ಆ ಶುಭದಿನಕ್ಕೆ,

ತಿಳಿಸಲು ನನ್ನಿ ಮನದ ಬಯಕೆ,

ಮರಳಿ ಬಂದುಬಿಡು ನೀ ಹೃದಯಕೆ,

ಮುಡಿಪಾಗಿಡುವೆ ನನ್ನಿ ಬದುಕೆ.......

✍ ✍ ಸೂರ್ಯಾದೀಪ🌞🪔

No comments:

Post a Comment