1.24.2024

||ನವ ದಿನದ ಆರಂಭ|| Nava Dinada Arambha||

ನವ ದಿನದ ಆರಂಭ


ನೆನಪಾಗುತ್ತಿದೆ ಆ ಹೊಸ ದಿನಗಳ ಬೆಳಕು,
ಬರುತ್ತಿರುವೆಯಾ ನೀ, ನನ್ನ ಮನಸು ಹೊತ್ತುದು ನಿನ್ನ ಕಡೆಗೆ,
ಹಾಗೆ ಹೊರಗೊಮ್ಮಲೇ ನನ್ನ ಬದುಕಿನ ಚಿರಕೋಟಿಗಳು ಮೂಡುತ್ತಿರುವು,
ಬಂದರೆ ನೀ ನನ್ನ ಸೇರುವ ಹಾದಿಗೆ,
ನನ್ನ ಹೃದಯ ಹಾರುತ್ತಿದೆ ನಿನ್ನ ಬಾಗಿಲನ್ನು ಕೊಡಲು,
ಪ್ರೀತಿಯ ಹೆಸರಿನಲ್ಲಿ ನಾ ಹೊರಗೊಮ್ಮಲೇ ಕುಣಿದಿರುವೆ,
ನನ್ನ ಮನಸ್ಸು ಹಾಡುತ್ತಿದೆ ನಿನ್ನ ಕಡೆ,
ಬಂದು ನನ್ನ ಜೀವನಕ್ಕೆ ನವಚೇತನವನ್ನು ತುಂಬಿರುವೆ,
ನೀ ಸರಿದು ನನ್ನ ಬದುಕನ್ನು ಹೊಸ ಹೆಜ್ಜೆಯಿಂದ ಮುಂದೆ ನೂಕು.

✍ ✍ ಸೂರ್ಯಾದೀಪ🌞🪔

||ನೆನಪು || Nenapu||

 

ನೆನಪು

ಕಳೆದ ಆ ದಿನಗಳೇ ನೆನಪಾಗಿದೆ ನನಗಿಲ್ಲಿ,

ಬರುವೆಯಾ ನೀ ಹಿಂದಿರುಗಿ,

ಮಿಡಿಯುತಿದೆ ನನ್ನೀ ಮನ ಕರಗಿ,

ಬಂದರೆ ನೀ ಹಿಂದಿರುಗಿ,

ಚಲಿಸುವೆ ನಾ ಮರಳಿ,

ಪ್ರೀತಿಯ ಆ ಹೆಸರಲಿ ಕುಳಿತಿರುವೆ ಈ ಮನದಲಿ,

ಕೇಳದೆ ಕಣ್ಮರೆಯಾದೆಯಾ ಯಾವೊದೋ ನೆಪದಲಿ,

ನಾಟಕದ ಜೀವನ ಸಾಕಾಗಿದೆ ನನಗಿಲ್ಲಿ,

ಮತ್ತೊಮ್ಮೆ ನಗಿಸಲು ಬರುವೆಯಾ ನೀ ಮರಳಿ,

ನಾ ಕಾಯುತಿರುವೆ ಆ ಶುಭದಿನಕ್ಕೆ,

ತಿಳಿಸಲು ನನ್ನಿ ಮನದ ಬಯಕೆ,

ಮರಳಿ ಬಂದುಬಿಡು ನೀ ಹೃದಯಕೆ,

ಮುಡಿಪಾಗಿಡುವೆ ನನ್ನಿ ಬದುಕೆ.......

✍ ✍ ಸೂರ್ಯಾದೀಪ🌞🪔

8.26.2022

ಭಲೇ ಭಲೇ ಚೆಂದದ | ಚಿತ್ರ: ಅಮೃತ ವರ್ಷಿಣಿ| Bhale Bhale Chandada| Film: Amrutavarshini (1997)

 

ಚಿತ್ರ: ಅಮೃತ ವರ್ಷಿಣಿ 

ಹಾಡಿದವರು: ಎಸ್ ಪಿ ಬಾಲಸುಬ್ರಮಣ್ಯಂ |ನಟರು: ರಮೇಶ್ಸುಹಾಸಿನಿಶರತ್ ಬಾಬು|

ಎಲ್ಲಾ ಶಿಲ್ಪಗಳಿಗು ಒಂದೊಂದು ಹಿಂದಿನ ಕಥೆಯಿದೆ

ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ.....


ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ನಿನ್ನ ಚಂದ ಹೊಗಳಲು ಪದ ಪುಂಜ ಸಾಲದು

ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ  ಊರೆಲ್ಲ ಹೊಂಬೆಳಕು

ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು  ಕಾಲಡಿ ಹೂವಾಗಿ ಬರಬೇಕು


ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೆ

ನಿನ್ನ ಈ ಸರಿಗಮ ಕೇಳಿತು ಸಮಸಮ ಹಂಚಿತು

ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತು ನೋಡೋಕೆ ನಾ ಬಂದರೆ

ನಿನ್ನದೇ ಥಕಥೈ ಕಂಡಿತು ತಕದಿಮಿ ಹೆಚ್ಚಿತು

ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ

ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇವೆ

ಎಲ್ಲ ಸಾಲಲ್ಲು ಎಣುಕೋ ಅಕ್ಷರ ನಿಂದೇನ

ಉತ್ತರ ಇಲ್ಲದ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೇ.....


ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರು

ಅಂದವ ಹೊಗಳಲು ಸಾಧ್ಯವೇ ನಿನ್ನ ಮುಂದೆ ಮೌನವೇ

ಅತ್ತ ಊರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೆ

ನಡುವೆ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೆ

ಅಲ್ಲೊಂದು ರಾಜರ ಬೀದಿಯಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ

ಇಲ್ಲೊಂದು ಹೃದಯ ಕೋಟೆಯಿದೆ ಇಲ್ಲಿ ಎಂತೆಂಥ ಕನಸೋ ಕಾವಲಿದೆ

ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ


ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ......

6.11.2021

ರುಕ್ಕಮ್ಮ | ಚಿತ್ರ : ಸಿಪಾಯಿ(೧೯೯೬) | Rukkamma| Film : Sipayi (1996)

ರುಕ್ಕಮ್ಮ ನಾ ನೂರು ಊರು ನೋಡಿ ಬಂದೆ ರುಕ್ಕಮ್ಮ, 
ನೂರರಲ್ಲೂ ನಮ್ಮ ಊರೇ ಊರಮ್ಮ
ರುಕ್ಕಮ್ಮ ನಾ ನೂರು ಮಾತು ಕೇಳಿ ಬಂದೆ ರುಕ್ಕಮ್ಮ 
ನೂರರಲ್ಲೂ ನಮ್ಮ ಮಾತೆ  ಮಾತಮ್ಮ||

ಹೇ ರುಕಮ್ಮ, ಹೇ ರುಕಮ್ಮ, ಹೇ ರುಕಮ್ಮ, ನಮ್ಮ ಊರೇ ಊರಮ್ಮ   
ಹೇ ರುಕಮ್ಮ ನಮ್ಮ ಮಾತೆ ಮಾತಮ್ಮ 
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು,
ಜೀವ ನಿಡು ಅಂದರು  ನೀಡುವೇ ನಾ.
ಹೇ ರುಕಮ್ಮನಮ್ಮ ಊರೇ ಊರಮ್ಮ 
ಹೇ ರುಕಮ್ಮ ನಮ್ಮ ಮಾತೆ ಮಾತಮ್ಮ ||

ಗಗನ ಗಾಳಿಯಲಿ ಜಿಗಿದು ಜೀವಿಸಲಿ ಚೆಲುವ ಕನ್ನಡದ ಬಾವುಟ
ತಿರುಗು ಭೂಮಿಯಲಿ ಮಿನುಗಿ ತೋರಿಸಲಿ ಚೆಲುವ ಕನ್ನಡದ ಭೂಪಟ
ಮಾತಿನ ಜೊತೆಯಲ್ಲೇ ಗಂಧವಿರೋ ಕನ್ನಡ ಕಸ್ತೂರಿ ಎಲ್ಲೊ ಇಲ್ಲ,
ಊರಿನ ಹೆಸರಲ್ಲೇ ಕರುಣೆ ಇರೋ, ಕರುಣೆಯ ಕರುನಾಡು ಎಲ್ಲೂ ಇಲ್ಲ
ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ,
ಸತ್ಯವೇ ಹೇಳುವದೇ ಕಾಯಕ ಎನ್ನುತ್ತಾರೆ  ಇಲ್ಲಿ
ರುಕ್ಕಮ್ಮ ನಾ ಏಳು ಕೆರೆಯ ನೀರು ಕೂಡಿದೆ ರುಕ್ಕಮ್ಮ್,
ಏಳರಲ್ಲೂ ನಮ್ಮ ನೀರೇ ನೀರಮ್ಮ||

ಹೇ ರುಕಮ್ಮ, ಹೇ ರುಕಮ್ಮ, ಹೇ ರುಕಮ್ಮ, ನಮ್ಮ ಊರೇ ಊರಮ್ಮ   
ಹೇ ರುಕಮ್ಮ ನಮ್ಮ ಮಾತೆ ಮತಮ್ಮ್
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು ಜೀವ ನಿಡು ಅಂದರು  ನೀಡುವೇ ನಾ.
ಹೇ ರುಕಮ್ಮ ನಮ್ಮ ಊರೇ ಊರಮ್ಮ 
ಹೇ ರುಕಮ್ಮ ನಮ್ಮ ಮಾತೆ ಮಾತಮ್ಮ ||

ಇಲ್ಲಿರೋ ಸೌಭಾಗ್ಯ ಎಲ್ಲೂ ಇಲ್ಲ , ಈಶ್ವರಿ ತಾಯಿ ಇರೋ ಊರೇ ಇದು,
ಇಲ್ಲಿರೋ ಆನಂದ ಎಲ್ಲೂ ಇಲ್ಲ, ನೆಚ್ಚಿದ ಹುಡುಗಿ ಇರೋ ಊರೇ ಇದು ,
ನನ್ನ ಕಣ್ಣಿಗೇನಾದರೂ ನನಗೆ ತಾನೇ ನೋವು, ನನ್ನಮಣ್ಣಿಗೆನಾದರೂ ನನಗೆ ತಾನೇ ನೋವು
ರುಕ್ಕಮ್ಮ ನಾ ನೂರು ತರದ ಹೂವ ನೋಡಿದೇ  ರುಕ್ಕಮ್ಮ 
ನೂರರಲ್ಲು  ದುಂಡು  ಮಲ್ಲಿಗೆ ಮೊದಲಮ್ಮ ||

ಹೇ ರುಕಮ್ಮ, ಹೇ ರುಕಮ್ಮ, ಹೇ ರುಕಮ್ಮ, ನಮ್ಮ ಊರೇ ಊರಮ್ಮ   
ಹೇ ರುಕಮ್ಮ ನಮ್ಮ ಮಾತೆ ಮತಮ್ಮ್
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು ಜೀವ ನಿಡು ಅಂದರು  ನೀಡುವೇ ನಾ.
ಹೇ ರುಕಮ್ಮ ನಮ್ಮ ಊರೇ ಊರಮ್ಮ 
ಹೇ ರುಕಮ್ಮ ನಮ್ಮ ಮಾತೆ ಮಾತಮ್ಮ ||

1.06.2017

ಗಿರಿ ನವಿಲು ಎಲ್ಲೊ? | ಚಿತ್ರ : ಹ್ರದಯ ಹಾಡಿತು| Giri Naveelu Ello| Film : Hrudaya Haadithu(1991)


ಗಿರಿ ನವಿಲು ಯೆಲ್ಲೊ, ಕರಿ ಮುಗಿಲು ಎಲ್ಲೊ?
ಮಳೆ ಮಿಂಚು ಕಂಡು ಬಲು ಮೊಹ ಗುಂಡು
ಕುಣಿದಾಡಿ ಕೂಗದೆ,
ಪ್ರೇಮ ಯನುವಾ ಮಾತಲ್ಲಿ ಯಂಥ ಮೊಡಿಯೊ
ಪ್ರೀತಿಸಿರುವ ನಾವಿಂದು 
 ಯಂಥ ಜೊಡಿಯೊ||

ಗಿರಿ ನವಿಲು ಯೆಲ್ಲೊ, ಕರಿ ಮುಗಿಲು ಎಲ್ಲೊ
ಮಳೆ ಮಿಂಚು ಕಂಡು ಬಲು ಮೊಹ ಗುಂಡು
ಕುಣಿದಾಡಿ ಕೂಗದೆ,
ಪ್ರೇಮ ಯನುವಾ ಮಾತಲ್ಲಿ ಯಂಥ ಮೊಡಿಯೊ
ಪ್ರೀತಿಸಿರುವ ನಾವಿಂದು ಯಂಥ ಜೊಡಿಯೊ||

ನಿನ್ನ ಕಣ್ಣ ನೊಟ ನೊಡಿದೆ,
ನೀನೆ ಜೀವ ಯಂದು ಹೆಳಿದೆ,
ನಿನ್ನ ಸ್ನೇಹ ಇಂದು ನೊಡಿದೆ,
ಸೋತು ನಲ್ಲ ನಿನ್ನ ಕೂಡಿದೆ,
ಒಲವಿನ ಗಂಧ ಕೊಡಲಾನಂದ ಹ್ರದಯ ಹ್ರದಯ ಹಾಡಿದೆ
ಪ್ರೇಮ ಯನುವಾ ಮಾತಲ್ಲಿ ಯಂಥ ಮೊಡಿಯೊ
 ಪ್ರೀತಿಸಿರುವಾ ನಾವಿಂದು ಯಂಥ ಜೊಡಿಯೊ||
ಗಿರಿ ನವಿಲು ಯೆಲ್ಲೊ, ಕರಿ ಮುಗಿಲು ಎಲ್ಲೊ||

ಯಂಥ ಭಾಗ್ಯ ನಿನ್ನ ನೊಡಿದೆ
ಯಂಥ ಪುಣ್ಯ ನಿನ್ನ ಸೆರಿದೆ
ನೀನೆ ನನ್ನ ಬಾಳ ಜೊಡಿಯು
ನೀನೆ ನನ್ನ ಪ್ರೇಮ ಗೀತೆಯು
ವಲಿಯುತ ಬಂದೆ ಗೆಲುವನು ತಂದೆ ನನ್ನ ಬಾಳಿಗೆ,
ಪ್ರೇಮ ಯನುವಾ ಮಾತಲ್ಲಿ ಯಂಥ ಮೊಡಿಯೊ,
ಪ್ರೀತಿಸಿರುವಾ ನಾವಿಂದು ಯಂಥ ಜೊಡಿಯೊ||

ಗಿರಿ ನವಿಲು ಯೆಲ್ಲೊ, ಕರಿ ಮುಗಿಲು ಎಲ್ಲೊ||
ಮಳೆ ಮಿಂಚು ಕಂಡು ಬಲು ಮೊಹ ಗುಂಡು
ಕುಣಿದಾಡಿ ಕೂಗದೆ,
ಪ್ರೇಮ ಯನುವಾ ಮಾತಲ್ಲಿ ಯಂಥ ಮೊಡಿಯೊ
ಪ್ರೀತಿಸಿರುವ ನಾವಿಂದು ಯಂಥ ಜೊಡಿಯೊ||

ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
(Corrections are welcome)